Tuesday, October 22, 2019

ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ|| ಮಾ ಕರ್ಮಫಲ ಹೇತುರ್ಭೂ || ಮಾ ತೇ ಸಂಗೋಸ್ತ್ವ ಕರ್ಮಣಿ




        
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭||
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮||

“ನಿನಗೆ ನಿನ್ನ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಮತ್ತು ಕರ್ಮಮಾಡದೇ ಜೀವಿಸಬೇಕೆಂಬ ಹಂಬಲ ನಿನ್ನಲ್ಲಿ ಹುಟ್ತದಿರಲಿ. ಹಾಗೆ ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂದು ಕರೆಯಲ್ಪಡುತ್ತದೆ ಎಂಬುದು ಈ ಶ್ಲೋಕದ ಅರ್ಥ.

ನೀನು ನಿನ್ನ ಕರ್ತವ್ಯ ವನ್ನು ತಿಳಿದು ಅದನ್ನು ಮಾಡುವುದರಲ್ಲಿ ಮನಸ್ಸಿಡಬೇಕು; ಫಲದ ಚಿಂತೆ ಮಾಡದೆ ಕರ್ತವ್ಯ (ಕರ್ಮ) ಮಾಡುವುದರಲ್ಲಿ ಶ್ರದ್ಧೆ ಇಡಬೇಕು. ನಿನ್ನ ಕರ್ತವ್ಯ (ಕರ್ಮ)ವನ್ನು ಮಾಡದೆ ಇರುವ ವಿಚಾರ ನಿನಗೆ ಬಾರದೆ ಇರಲಿ.

ಕಲಿಯುಗದಲ್ಲಿ ಕರ್ಮಫಲಾಪೇಕ್ಷೆಯಿಲ್ಲದೇ ಜೀವಿಸುವವರು ಸಿಗುವುದು ತುಂಬಾ ಕಷ್ಟ. ಆದರೆ ಈ ಫಲಾಪೇಕ್ಷೆಗೂ ಒಂದು ಇತಿ-ಮಿತಿಯನ್ನು ಇಟ್ಟುಕೊಂಡು ಜೀವಿಸಿದರೆ ಮುಕ್ತಿಯ ದಾರಿಯತ್ತ ಸಾಗಬಹುದು. ನಾವು ಒಂದು ಕೆಲಸ ಮಾಡುತ್ತೇವೆಂದಾದರೆ ಅದರಿಂದಾಗುವ ಲಾಭದ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಂಡೇ ಮಾಡುತ್ತೇವೆ. ಆದರೆ ಪರಿಣಾಮ ಲಾಭವೂ ಆಗಬಹುದು, ಕಡಿಮೆ ಲಾಭವಾಗಬಹುದು ಅಥವಾ ನಷ್ಟವೂ ಆಗಬಹುದು. ಈ ಮೂರನ್ನೂ ಸಮನಾದ ಭಾವದಿಂದ ಸ್ವೀಕರಿಸುವ ಗುಣವನ್ನು ನಾವು ಅಳವಡಿಸಿಕೊಂಡಾಗ ನೆಮ್ಮದಿಯ ಜೀವನ ಸಾಧ್ಯ. ಪ್ರತಿಫಲಾಪೇಕ್ಷೆಯಿಂದಾಗಿಯೇ ನಾವು ಮಾಡಬೇಕಾದ ಕೆಲಸಗಳಿಂದ ಹಿಂದೆ ಸರಿಯಬಾರದು.  ಅಂದರೆ ನನ್ನ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂಬ ಕಾರಣಕ್ಕೆ ಸುಮ್ಮನೆ ಕುಳಿತುಕೊಳ್ಳಲೇಬಾರದು. ಅಂತಹ ಮನಸ್ಥಿತಿಯು ಎಂದಿಗೂ ಬಾರದಿರಲಿ ಎಂದು ಕೃಷ್ಣ ಹೇಳುತ್ತಾನೆ. ಆದರೆ ‘ನಾನು ಏನನ್ನೂ ಮಾಡುವುದಿಲ್ಲ’ ಎಂದುಕೊಂಡಲ್ಲಿಗೆ ನಮ್ಮ ಬದುಕು ಅಲ್ಲಿಯೇ ನಿಂತುಬಿಡುತ್ತದೆ. ಅರ್ಥಾತ್ ನಾವು ಬದುಕಿದ್ದೂ ಸತ್ತಂತೆ.

ಬುವಿಯಲ್ಲಿ ಪ್ರತಿಯೊಬ್ಬರಿಗೂ ಜಯ-ಅಪಜಯ, ಕೀರ್ತಿ-ಅಪಕೀರ್ತಿ, ನೋವು-ನಲಿವು ಇದ್ದದ್ದೇ. ಇವೆಲ್ಲವನ್ನೂ ಅನುಭವಿಸುವ ನಮ್ಮ ಮನಸ್ಸು ಇಲ್ಲಿ ಸ್ಥಿರವಾಗಿರಬೇಕು. ಅಂದರೆ ಗೆಲುವು-ಸೋಲುಗಳಿಗೆ ಸಮನಾದ ಭಾವವನ್ನು ಹೊಂದುವ ಮನಸ್ಥಿತಿ ನಮ್ಮದಾಗಬೇಕು. ಯಾಕೆಂದರೆ ಮನುಷ್ಯನ ಜೀವನದಲ್ಲಿ ಎಲ್ಲವೂ ಕ್ಷಣಿಕ. ಏಳುಬೀಳುಗಳನ್ನು ಲೆಕ್ಕಾಚಾರ ಹಾಕುತ್ತ ಅಲ್ಲಿಯೇ ಸ್ಥಿರವಾಗಿಬಿಟ್ಟರೆ ಬದುಕು ಸಾಗುವುದಾದರೂ ಎಂತು? ಹಾಗಾಗಿ ಪ್ರತಿಫಲವನ್ನು ಸಮಚಿತ್ತದಿಂದ ಸ್ವೀಕರಿಸುವುದನ್ನು ಬೆಳೆಸಿಕೊಳ್ಳಬೇಕು. ಪ್ರತಿಫಲವಿಲ್ಲದೇ ಯಾವುದನ್ನೂ ಮಾಡಲಾಗದು ಎಂಬ ಪರಿಸ್ಥಿತಿಯಿದ್ದರೂ ಕೂಡ ಅದರ ಪ್ರತಿಫಲವನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆಂಬ ನಿರ್ಧಾರಕ್ಕೆ ಬಂದು ಜೀವಿಸಿದರೆ ಎಲ್ಲವೂ ಆನಂದಮಯವೇ. ಈ ಸಮನಾದ ಭಾವದಿಂದ ಸ್ವೀಕರಿಸುವುದನ್ನೇ ಕೃಷ್ಣನು ಯೋಗ ಎನ್ನುತ್ತಾನೆ.  ಈ ಯೋಗದ ಸ್ಥಿತಿಯಲ್ಲಿ ಬದುಕುವಾಗ ನೋವುಗಳೂ ಒಂದೇ; ನಲಿವುಗಳೂ ಒಂದೇ.

ಅಸಲಿಗೆ ಕರ್ಮ ಎಂದರೇನು? ಕರ್ಮ ಎಂಬ ಪದದ ನಿಜವಾದ ಅರ್ಥ ಕೆಲಸ, ಕಾರ್ಯ ಅಥವಾ ಕ್ರಿಯೆ. ಕರ್ಮ ಎಂಬುದನ್ನು ನಿರ್ಬಂಧಗಳನ್ನು ಹೇರುವ ಕಾನೂನು ಎಂದು ನೋಡುವುದರ ಬದಲಿಗೆ ಅದು ನಮ್ಮ ಜೀವನವನ್ನು ಉನ್ನತಿಗೆ ಕರೆದುಕೊಂಡು ಹೋಗುವ ಸಾಧನೆ ಎಂದು ನೋಡಿದರೆ ಒಳ್ಳೆಯದು. ಹೌದು ಕರ್ಮ ಎಂಬುದು ನಿಜವಾದ ಜ್ಞಾನದಿಂದ ಮಾಡುವ ಕ್ರಿಯೆ. ಒಳ್ಳೆಯ ಕರ್ಮ ಮತ್ತು ಕೆಟ್ಟ ಕರ್ಮಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮಾನವನ ಜೀವನವನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿ, ಒಳ್ಳೆಯ ಕರ್ಮಗಳು ಅವರಿಗೆ ಒಳ್ಳೆಯ ಫಲಿತಾಂಶಗಳನ್ನು ನೀಡಿರುತ್ತವೆ. ಕೆಟ್ಟ ಕರ್ಮಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡಿರುತ್ತವೆ.


ನೀವು ಪ್ರಪಂಚಕ್ಕೆ ಏನು ನೀಡುತ್ತೀರೋ, ಅದನ್ನೆ ಪಡೆಯುತ್ತೀರಿ. ಅದು ಪ್ರೀತಿ, ದ್ವೇಷ, ಅಸೂಯೆ, ಕರುಣೆ ಯಾವುದಾದರು ಆಗಿರಬಹುದು, ನೀವು ಯಾವ ಭಾವನೆಯನ್ನು, ಕರ್ಮವನ್ನು ಜಗತ್ತಿಗೆ ನೀಡುತ್ತೀರೋ, ಅದನ್ನೆ ನೀವು ಪುನಃ ಪಡೆಯುವಿರಿ. ಆದ್ದರಿಂದ ಸಂತೋಷ, ಪ್ರೀತಿ ಮುಂತಾದ ಸಕಾರಾತ್ಮಕತೆಯನ್ನು ಜಗತ್ತಿಗೆ ನೀಡಿ, ಅದನ್ನೆ ಪಡೆಯಿರಿ.


ಗೀತಾಸಾರ: ಸರಳವಾದ ಬದುಕಿನ ದಾರಿಗಳು ಗೀತೆಯಲ್ಲಿವೆ. ಪ್ರತಿಫಲಾಪೇಕ್ಷೆಯಿಲ್ಲದೆ ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮನಸ್ಸನ್ನು ಬೆಳೆಸುವ ಕಾರ್ಯ ಆಗಬೇಕು.




**Content: From many sites

Monday, December 14, 2015

ಅಸಹಿಷ್ಣುತೆ........

                     





                 ಈಗ ಕಾಲ ಹೇಗೆ ಬದಲಾಗಿದೆ ಅಂದ್ರೆ, ಅಸಹಿಷ್ಣುತೆ ಅರ್ಥವನ್ನು ಸಹಿಷ್ಣುತೆ ಗೊತ್ತಿಲ್ಲದವರು ಹೇಳಿಕೊಡುತ್ತಿದ್ದಾರೆ. ಯಾವೊಬ್ಬ ಮನುಷ್ಯನು ಒಂದು ಇರುವೆ ಅಥವಾ ಸೊಳ್ಳೆಯನ್ನು ಕೊಲ್ಲದೆ ಇರುವನಾ? ಅದು ಅವನ್ನ ಕಚ್ಚೊಕೆ ಬಂದ್ರೆ ಸುಮ್ನೆ, ಬಾ ಕಚ್ಚಿ ಹೋಗು ಅಂತ ಹೇಳೋಕ್ಕಾಗುತ್ತಾ? ಕಚ್ಚ್ತಾ ಇದ್ದ್ರೆ ಸುಮ್ನೆ ಇರ್ತೀರಾ? ಇಲ್ಲ್ ತಾನೇ. ಅರ್ಥಾ ಆಗಿದೆ ಅಂತ ಅನಕೋತೀನಿ. ಸ್ವಾತಂತ್ರ ನಂತರ ಯಾವ್ದೇ ಪಕ್ಷ ಆಳ್ವಿಕೆ ಇತ್ತೋ ಆವಾಗ್ಲಿಂದ ಈ ಅಸಹಿಷ್ಣುತೆ ಸಹಿಷ್ಣುತೆ ಇದ್ದೇ ಇದೆ.  ಇಡೀ ಭಾರತದ ಇತಿಹಾಸವನ್ನು ತೆಗೆದು ನೋಡಿ, ಭಾರತವನ್ನು ಹಿಂದೂಸ್ತಾನ ಎಂದೇ ಕರೆಯಲ್ಪಟ್ಟಿದೆ. ಈಗಲೂ ಎಸ್ಟೋ ಮುಸಲ್ಮಾನ ದೇಶಗಳು ಭಾರತವನ್ನು ಹಿಂದೂಸ್ತಾನ ಎಂದೇ ಕರೀತಾರೆ. ಅಂದ್ರೆ ಭಾರತ ಸಹಿಷ್ಣುತೆಯ ದೇಶ ಅಂದರ್ಥ.

ಈಗಿನ ಪುಟ್ಟಗೋಶಿಗಳು ಇಂದು ನಿನ್ನೆ ಹುಟ್ಟಿದವರು ಅಸಹಿಷ್ಣುತೆ ಬಗ್ಗೆ ಮಾತಾಡ್ತಾ ಇದ್ದಾರೆ. ಇವರಿಗೆ ಯಾರು ಇನ್ನೂ ರುಚಿ ತೋರಿಸಿಲ್ಲ ಅನ್ನಿಸುತ್ತೆ. ಅಸಹಿಷ್ಣುತೆ ಅಂದರೆ ಏನು ಅಂತ. ಬೇವರ್ಷಿಗಳು, ಸುಮ್ನೆ ಇರೋಕ್ಕೆ ಏನ ತೊಂದ್ರೆ ಇವರಿಗೆ. ಒಬ್ಬ ಕಲಾವಿದ ತನ್ನ ಅಭಿಮಾನಿಗಳಿಗೆ ಹುರಿದುಂಬಿಸಬೇಕೆ ಹೊರತು ದೇಶ್ ಬಿಟ್ಟು ಹೋಗುವ ಮಾತನ್ನ ಹೇಳಬಾರದು. ಒಂದು ಸಾರಿ ಭಾರತದಲ್ಲಿ ಎಸ್ಟು ಮಸೀದಿಗಳಿವೆ, ಚರ್ಚುಗಳಿವೆ ಎಣಿಸಿ ನೋಡಿ. ಮತ್ತೆ ಇಡೀ ಪ್ರಪಂಚದಲ್ಲ್ ಎಸ್ಟು ಮಸೀದಿಗಳಿವೆ, ಚರ್ಚುಗಳಿವೆ ಎಣಿಸಿ ನೋಡಿ. ಆವಾಗ ನಿಮಗೆ ಗೊತ್ತಾಗುತ್ತೆ ಭಾರತ ಎಸ್ಟು ದೊಡ್ಡ ಸಹಿಸ್ನುತೆ ರಾಷ್ಟ್ರ ಎಂದು. ಇಡೀ ಪ್ರಪಂಚದ ಮಸೀದಿ, ಚರ್ಚುಗಳಿಗಿಂತ ಭಾರತ ದೇಶದಲ್ಲೇ ಅತಿ ಹೆಚ್ಚಾಗಿ ಇರೋದು. ಇದೆ ಕಾರಣಕ್ಕಾ ಭಾರತ ದೇಶವನ್ನು ಅಸಹಿಷ್ಣುತೆ ದೇಶ ಅಂತ ಕರಿಯೋಧು. ಪಾಕಿಸ್ತಾನಕಿಂತ ಜಾಸ್ತಿ ಮುಸ್ಲಿಮ ಬಂದುಗಳು ಇರೋದು ಭಾರತದಲ್ಲಿ.

ಆದರೆ ನಮ್ಮ ದೇಶದ ಅನ್ನವನ್ನೇ ತಿಂದು ಸರ್ಕಾರದಿಂದ ಪ್ರಶಸ್ತಿ ಪಡೆದು, ಸಿಗುವ ಎಲ್ಲ ಸೌಲತ್ತುಗಳನ್ನು ಅನಿಭವಿಸಿ, ಈಗ ಅಸಹಿಷ್ಣುತೆ ಹೆಸರಿನಲ್ಲಿ ತಮ್ಮ ಪ್ರಶಸ್ತಿ ವಾಪಸಾತಿಯಂಥ ನಾಟಕವಾಡುತ್ತಿದ್ದಾರೆ. ಆದರೆ ಭಾರತ ಒಂದು ಸಹಿಷ್ಣು ರಾಷ್ಟ್ರ ಎನ್ನಲು ಸಾಕಷ್ಟು ಪುರಾವೆಗಳು ಸಿಗುತ್ತವೆ. ಜಗತ್ತಿನ ಯಾವ ರಾಷ್ಟ್ರಗಳಲ್ಲಿಯೂ ಇಲ್ಲದಷ್ಟು ಮಸೀದಿ, ಚರ್ಚಗಳು ಭಾರತದಲ್ಲಿದೆ. ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚಿನ ಮಸೀದಿಗಳಿವೆ. ಆದರೆ ಜಗತ್ತಿನ ಭೇರೆ ಯಾವ ದೇಶದಲ್ಲೂ ಇಷ್ಟೊಂದು ಮಸೀದಿಗಳಿಲ್ಲ. ವಾಷಿಂಗ್ಟನ್ನಿನ್ನಲ್ಲಿ 24 ಚರ್ಚುಗಳಿದೆಯಂದೆ. ಲಂಡನ್ ನಗರದಲ್ಲಿ 71 ಚರ್ಚುಗಳು ಇವೆಯಂತೆ. ಇಟಲಿಯ ಮಿಲಾನಿನಲ್ಲಿ 68 ಇವೆಯಂತೆ. ಆದರೆ
ಬರೀ ದೆಹಲಿಯೊಳಗೆ 271 ಚರ್ಚುಗಳಿವೆ. ಇನ್ನು ಭಾರದ ದೇಶದಾಧ್ಯಂತ ಇನ್ನೆಷ್ಟು ಇರಬೇಡ. ಹೀಗಾಗಿ ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ಭಯದ ವಾತಾವರಣ ಎಲ್ಲಿಯೂ ಇಲ್ಲ. ಹಾಗಾಗಿಯೇ ಅವರಲ್ಲಿ ಸಹೃದಯರಾದ ಕೆಲವು ಮುಸ್ಲಿಂ ಬಾಂದವರು, ಬಾರತದಷ್ಟು ಸಹಿಷ್ಣು ದೇಶ ಇನ್ನೊಂದಿಲ್ಲ. ಅಸಹಿಷ್ಣುತೆ ಎನ್ನುವುದು ಇಲ್ಲಿ ಇಲ್ಲವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಹಿಂದೆ ಪಾಕಿಸ್ತಾನದ ಮುಸ್ಲಿಂ ಪ್ರಜೆಗಳೇ ಭಾರತಕ್ಕೆ ವಲಸೆ ಬರುವ ಮಾತಾಡಿದ್ದರು. ಜೊತೆಗೆ ಪಾಕ್‌ ಆಕ್ರಮಿತ ಕಾಶ್ಮೀರದ ಜನರು ಭಾರತ ಆಳ್ವಿಕೆ ಬೇಕೆಂದು ದೊಡ್ಡ ಹೋರಾಟವನ್ನೇ ಆರಂಭಿಸಿದ್ದರು. ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡುವ ಶಾರುಕ್‌ ಖಾನ್‌ ಅಮೇರಿಕಾಕ್ಕೆ ತೆರಳಿದಾಗ ಖಾನ್‌ ಎಂದು ಹೆಸರಿರುವುದಕ್ಕೆ ಉಗ್ರ ಎಂದು ಆತನ ಭಟ್ಟೆ ಬಿಚ್ಚಿಸಲಿಲ್ಲವೇ. ಇದು ಅಸಹಿಷ್ಣುತೆ ಎಂದು ಶಾರುಕ್‌ಗೆ ಕಂಡಿಲ್ಲವೇ..? ಆದರೆ ಭಾರತದಲ್ಲಿ ಮಾತ್ರ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡಿದ್ದರ ಹಿಂದೆ ಏನೋ ಸಂಚಿದೆ ಎಂದೇ ಅರ್ಥೈಸಿಕೊಳ್ಳಬೇಕಲ್ಲವೇ. ಇಷ್ಟು ಆಧಾರ ಸಾಕು ಭಾರತದಲ್ಲಿ ಅಸಹಿಷ್ಣುತೆ ಇಲ್ಲವೆಂದು ಹೇಳಲು.

ಕಳೆದ ಒಂದುವರೆ ವರ್ಷಗಳಿಂದ ಮೋದಿ ಅವರ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎನ್ನುವ ಅಭಿಪ್ರಾಯವಿದೆ. ವಿದೇಶಗಳಿಂದ ಬಂಡವಾಳದ ಹೊಳೆಯೇ ಹರಿದುಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಚೀನಾವನ್ನೇ ಹಿಂದಿಕ್ಕಲು ಹೊರಟಿದೆ. ಅಮೇರಿಕಾದಂಥ ದೇಶ ಕೂಡ ಬಹಿರಂಗವಾಗಿ ಸ್ನೇಹ ಹಸ್ತ ಚಾಚಿದೆ. ಈ ಜೊತೆಗೆ ವಿವಿಧ ದೇಶಗಳು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ನೀಡಲು ಬೆಂಬಲವನ್ನೂ ನೀಡುವ ಭರವಸೆ ನೀಡಿವೆ. ಆದರೆ ಇದೆಲ್ಲ ಬೆಳವಣಿಗೆಗಳು ನಮ್ಮ ನೆರೆಯ ಕೆಲ ದೇಶಗಳ ಜೊತೆಗೆ ದೇಶದ ಅಭಿವೃದ್ಧಿ ಸಹಿಸದ ನಮ್ಮವರೇ ಆದ ಕೆಲವರ ಕಣ್ಣುಕೆಂಪಾಗಿದೆ. ಅಸಹಿಷ್ಣುತೆ ಹುಟ್ಟುಹಾಕಿದ ಜನರಿಗೆ ಜಾಗತಿಕ ಮಟ್ಟದಲ್ಲಿ ನಮ್ಮ ಪ್ರಧಾನಿಯ ವರ್ಚಸ್ಸು, ಮತ್ತು ದೇಶದ ಗೌರವ ಹೆಚ್ಚುವುದು ಬೇಕಿಲ್ಲ. ಇವರಿಗೆ ಭಾತರ ಅಭಿವೃದ್ಧಿ ಹೊಂದಿದರೆ ತಮ್ಮ ಓಟ್‌ ಬ್ಯಾಂಕ್‌ಗೆ ಹೊಡೆತ ಉಂಟಾಗುವ ಭಯವೂ ಇರಬಹುದು. ಮುಂದೆ ಅಧಿಕಾರವೇ ಸಿಗದೇ ಹೋದರೆ ಎನ್ನುವ ಆತಂಕವೂ ಇರಬಹುದು. ಹೀಗಾಗಿ ಅವರ ಹಿಂಬಾಲಕ ಸಾಹಿತಿಗಳನ್ನು ಎತ್ತಿಕಟ್ಟಿ, ಅವರ ಮೂಲಕ ದಿಕ್ಕೊಂದರಂತೆ ಕಥೆ ಕಟ್ಟಿ ಅಸಹಿಷ್ಣುತೆ ಇದೆ ಎಂದು ಬೊಬ್ಬೆಹಾಕಲಾರಂಭಿಸಿದ್ದಾರೆ. ಅಲ್ಲದೇ ಈ ಅಸಹಿಷ್ಣುತೆ ಎನ್ನುವ ಶಬ್ದದ ಮೂಲಕ ತಮಗೆ ಯಾವುದೋ ಕಾಲದಲ್ಲಿ ಸರ್ಕಾರ ನೀಡಿದ ಪ್ರಶಸ್ತಿ ಮರಳಿಸುವಂಥ ಡೋಂಗಿ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ. ಅಸಹಿಷ್ಣುತೆ ಮೂಲಕ ಪ್ರಶಸ್ತಿ ವಾಪಸ್ಸು ನೀಡುತ್ತಿರುವ ಬುದ್ಧಿಜೀವಿಗಳು, ಕಲಾವಿದರು ಪ್ರಶಸ್ತಿ ಪತ್ರವನ್ನು ಮಾತ್ರ ಏಕೆ ಹಿಂದಿರುಗಿದುತ್ತಿದ್ದಾರೆ. ಅವರಿಗೆ ನೀಡಿದ ಇತರ ಸೌಲಭ್ಯದ ಜೊತೆಗೆ ನೀಡಿದ ಇನಾಮನ್ನೂ ಹಿಂದಿರುಗಿಸಬಹುದಿತ್ತಲ್ಲ. ಆದರೆ ಪ್ರಶಸ್ತಿ ಹಿಂದಿರುಗಿಸಿದ ಯಾವೊಬ್ಬನೂ ತನಗೆ ಸರ್ಕಾರ ನೀಡಿದ ಹಣವಾಗಲೀ ಸೈಟ್‌ ಸೇರಿದಂತೆ ಇರತ ಸೌಲಭ್ಯಗಳಾಗಲೀ ಏಕೆ ಮರಳಿಸಿಲ್ಲ.? ಅಂದರೆ ಇದು ಮರಳಿಸಿದ ತಮಗೆ ಹಿಂದೆ ಪ್ರಶಸ್ತಿ ಕೊಟ್ಟ ಧಣಿಗಳನ್ನು ಮೆಚ್ಚಿಸಲು ತೆಗೆದುಕೊಂಡ ಕ್ರಮ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.

Wednesday, November 5, 2014

ಅಮ್ಮ ಎಂದರೇ.....

             


           "ಅಮ್ಮ ಎಂದರೆ ಏನೋ ಹರುಷವು, ನಮ್ಮಾ ಬಾಳಿಗೆ ಅವಳೇ ದೈವವು....." P B. ಶ್ರೀನಿವಾಸ ಅವರ ಮದುರವಾದ ಕಂಠದಲ್ಲಿ ಮೂಡಿಬಂದ ಹಾಡು. ಇನ್ನೂ ಕೂಡಾ ಈ ಹಾಡು  ತುಂಬಾನೇ ಜನಪ್ರಿಯ. ಮೊದಲು ಇದನ್ನು ಮುನ್ನುಡಿಯಾಗಿ ಬಳಸಲು ಕಾರಣವೂ ಇದೆ. ಕಾರಣ ಏನು ಅಂದ್ರೆ ಈಗಿನ ಪೀಳಿಗೆ. ಈಗಿನ ಪೀಳಿಗೆ ಅಮ್ಮ ಅನ್ನೋ ಪದವನ್ನೇ ಮರೆತು ಹೋಗತಾ ಇದ್ದಾರೆ ಈ ಇಂಗ್ಲೀಷ್ ಭಾಷೆಯಿಂದ. ಶಾರ್ಟ್‌ಕಟ್ ಆಗಿ, mum, mom, mumma. Mumma ಅಂತೂ ಎರಡು ಅರ್ಥಗಳನ್ನು ಕೊಡುತ್ತೆ. ಒಂದು ತಾಯಿಯನ್ನ ಕೂಗಿದ ಹಾಗೆ ಎರಡೆನೇಯದು ಊಟವನ್ನು ಕೊಡು ಅಂತಾ.

         ಯಾಕೆ ಗೊತ್ತಿಲ್ಲ, ಈಗಿನ ತಾಯಂದಿರಿಗೆ ಕನ್ನಡದಲ್ಲಿ ಅಮ್ಮ ಅಂತ ಕರಿಸ್ಗೊಂಡ್ರೆ ಏನು ಆಸ್ತಿ ಕರಗಿ ಹೋಗುತ್ತಾ? ಮಗು ಅಮ್ಮ ಅಂದ್ರೆ ಸಾಕು, ಎಲ್ಲಿಲ್ಲದ ಕೋಪ. ಎಲ್ಲ ಕೋಪ ತಾಪಗಳನ್ನು ಒಂದು ಮಾಡಿ ಅದಕ್ಕೆ ಹೊಡೆದು Mummy ಅನ್ನು ಅಂತ ಕಲಿಸಿ ಕೊಡತಾರೆ. ಅಮ್ಮ ಅನ್ನೋ ಶಬ್ದಕ್ಕೆ ಈಗಿನ ಕಂಪ್ಯೂಟರ್ ಯುಗದಲ್ಲಿ ಅರ್ಥಾನೇ ಕಳಕೊಳ್ತಾ ಇದೆ ಅನಿಸ್ತಾ ಇದೆ.

       ಸರಿ ಅಂತಾ ಗ್ರಾಮೀಣ ಪ್ರದೇಶದಲ್ಲಾದ್ರೂ ನೋಡೋಣಾ ಅಂದ್ರೆ, ಅಯ್ಯೋ ಅದು ನಗರ ಪ್ರದೇಶಕ್ಕಿಂತಾ ತುಂಬಾನೇ ಫಾರ್ವರ್ಡ್. ನಗರದಲ್ಲಿ mumma, mommy, mom ಅಂದ್ರೆ ಗ್ರಾಮಿಣ/ ಹಳ್ಳಿಗಳಲ್ಲಿ ma ಅಂತ ಕರೆಯೋದು ನೋಡಿದೀನಿ. ಖುಷಿಯಾಗಿ ವಬ್ಬಾಕೆಗೆ ಕೇಳಿದೆ, ನೀವಾದ್ರೂ ಹಿಂದಿಯ ma ಶಬ್ದವನ್ನ ಮಕ್ಕಳಿಗೆ ಕಲಿಸಿದ್ರಲ್ಲ ಅಂದ್ರೆ ಅದಕ್ಕೆ ಅವಳು ಅದು ಇಂಗ್ಲಿಷಿನ mommy, mom, mumma ಶಬ್ದಕ್ಕೆ ಶಾರ್ಟ್‌ಕಟ್ ಅಂತ ಹೇಳಿಬಿಡೊದಾ.... ನೋಡಿ ಏನ ಗತಿ ಬಂದಿದೆ ನಮ್ಮ ಕನ್ನಡದ ಅಮ್ಮನಿಗೆ.

      ಪುಟ್ಟ ಲೋಹಿತ ಕುಮಾರ್, ಅಂದ್ರೆ ನಮ್ಮ ಅಣ್ಣಾವ್ರ ಮಗ ಪುನೀತ ರಾಜ್‌ಕುಮಾರ್ ಎಷ್ಟು ಸೊಗಸಾಗಿ ತನ್ನ ಚಿಕ್ಕ ಕಂಠದಲ್ಲಿ ಅಮ್ಮನ ಬಗ್ಗೆ ಚೆನ್ನಾಗಿ ವರ್ಣಿಸಿದ್ದಾನೆ. "ಯಾರಿವನು" ಚಿತ್ರದ ಹಾಡು "ಕಣ್ಣಿಗೆ ಕಾಣುವ ದೇವರು ಅಂದರೇ ಅಮ್ಮನೂ ತಾನೇ, ಅಮ್ಮನೂ ತಾನೇ" ದಯವಿಟ್ಟು ಒಮ್ಮೆಯಾದ್ರೂ ಇ ಸೊಗಸಾದ ಹಾಡನ್ನು ಕೇಳಿ. ಲಿಂಕ್ ಇಲ್ಲಿದೆ.



ದಯವಿಟ್ಟು ನಿಮ್ಮ ಅನಿಸಿಕೆಗಳು/ ಅಭಿಪ್ರಾಯಗಳು ಇದ್ದರೆ ತಿಳಿಸಿ. ನನ್ನನ್ನಾ ನಾನು ಇಂಪ್ರೂವ್ ಮಾಡಿಕೊಳ್ಳಬೇಕು ಅಂದ್ರೆ ಅದು ನಿಮ್ಮ ಥ್ರೂ....

ಧನ್ಯವಾದಗಳು,
ಇಂತಿ ಕನ್ನಡಿಗ,
ರವಿ



Tuesday, September 25, 2012

ಹೇಳೋದಕ್ಕೆ ಸಮಯ ವಿಲ್ಲಾ....

                                               



                          ಈ ಕಾಂಕ್ರೀಟ್ ಬದುಕಿನ ಮಧ್ಯೆ, ಹಾಳು ಮೂಳು ತಿಂದು ಬದುಕುತ್ತಿರೋ ನಮ್ಮಂಥ ಸಾಫ್ಟವೇರ ಉಗ್ಯೋಗಿಗಳಿಗೆ ಎರಡು ಮೂರು ನಿಮಿಷ ಕುಂತುಕೊಂಡು ಮಾತನಾಡೋದಕ್ಕೆ ಸಮಯ ಎಲ್ಲಿದೆ ಹೇಳಿ... ಈ ಮೊಬೈಲ್ ಕಂಪನಿಗಳಿಗೆ ಸಾಫ್ಟವೇರ ಉಗ್ಯೋಗಿಗಳು ಅಂದರೆ ಪಂಚಪ್ರಾಣ. ಯಾಕಂದ್ರೆ ಅವರಿಗೆ ಪ್ರಾಫಿಟ ತಂದು ಕೊಡುವವರೇ ಇವರುಗಳು. ಯಾವನೋ ಒಬ್ಬವನು ಬಸ್ನಲ್ಲಿ ಹೇಳ್ತಿದ್ದ, ನನಗೆ ನನ್ನ ಹೆಂಡತಿ ಮಕ್ಕಳು ಜೊತೆ ಕಾಲ ಕಳೆಯೋಕೆ ಸಮಯ ಸಿಗ್ತಿಲ್ಲ, ಅದಕ್ಕೆ ಸನ್ಯಾಸಿಯಾದರೆ ಯಾವ ತೊಂದರೆಗಳು ಇರಲ್ಲ ಅಂತೆ. ಅದಕ್ಕೆ ಅಲ್ಲೇ ಪಕ್ಕದಲ್ಲೇ ಕುಂತಿದ್ದ ಹಿರಿಯರೊಬ್ಬರು ಉದಾಹರಣೆಗೆ ಒಂದು ಸಣ್ಣ ಕಥೆ ಹೇಳಿದ್ರು. ಆ ಕಥೆ ಹೀಗಿದೆ.

               ಒಂದೂರಲ್ಲಿ ಒಬ್ಬ ಸಣ್ಣ ಪ್ರಮಾಣದ ವ್ಯಾಪಾರಸ್ಥ ಹೇಗೋ ಸ್ವಲ್ಪ ದಿವಸದಲ್ಲಿ ಕಷ್ಟ ಪಟ್ಟು ಸಿಕ್ಕಾಪಟ್ಟೆ ದುಡ್ಡು ಗಳಿಸಿದ. ದಿನೇ ದಿನೇ ಅವನ ಲಾಭ ಹೆಚ್ಚುತ್ತ ಹೋಯಿತು. ಸ್ವಲ್ಪ್ಪ ದಿವಸದಲ್ಲಿ ಅವನು ಊರಿಗೆ ಸಾಹುಕಾರನಾದ. ಅವನಿಗೆ ಕಿಂಚಿತ್ತು ವೇಳೆ ಸಿಗ್ಥಿರ್ಲಿಲ್ಲ ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಸುಖವಾಗಿ ಇರೋದಕ್ಕೆ. ದಿನಗಳು  ಸಾಗ್ಹ್ತ ಇದ್ದವು, ಅವನಿಗೆ ಹೆಂಡತಿ ಮತ್ತು ಮಕ್ಕಳ ಬಗ್ಗೆ ಕಾಳಜಿನೆ ಹೊರಟ್ಹೋಯ್ಹ್ತು. ಅವನಿಗೆ ಜೀವನದಲ್ಲಿ ಎಲ್ಲವು ಇತ್ತು ಆದರೆ ಸುಕವಿರಲಿಲ್ಲ. ಅದೇ ಯೋಚನೆಲಿ ಅವನು ಮುಳುಗಿರುವಾಗ ವ್ಯಾಪಾರದ ಕಡೆಗಿನ ಮೋಹ ಹೊರಟ್ಹೋಯ್ಹ್ತು. ವ್ಯಾಪಾರದಲ್ಲಿ ಸಿಕ್ಕಾಪಟ್ಟೆ ನಷ್ಟ ಅನುಬವಿಸಿದ, ಮರಳಿ ಅದೇ ಸ್ತಿಥಿಯಲ್ಲಿ. ನಂತರ ಅವನಿಗೆ ತಿಳಿದಿದ್ದು ದುಡ್ಡೇ ಎಲ್ಲವೂ ಅಲ್ಲ ಜೀವನದಲ್ಲಿ, ನಮ್ಮ ಸುಖ ಸಂತೋಷ ಇರೋದು ನಮ್ಮ ತಂದೆ, ತಾಯಿ, ಹೆಂಡತಿ ಮಕ್ಕಳ ಜೊತೆಯಲ್ಲಿ ಇರೋದ್ರಿಂದ. 

            ದುಡ್ಡು ಬೇಡ ಅಂಥಾ ಹೇಳತಾ ಇಲ್ಲ, ದುಡ್ಡೇ ಜೀವನದಲ್ಲಿ ಎಲ್ಲಾ ಅಲ್ಲ. ನಿಮ್ಮ ನೆಚ್ಚಿನವರ ಜೊತೆ ಸ್ವಲ್ಪ ಕಾಲ ಕಳೆಯಿರಿ. ನಿಮಗೂ ನೆಮ್ಮದಿ ಸಿಗುತ್ತದೆ ಮತ್ತು ನಿಮ್ಮ ನೆಚ್ಚಿನವರು ಕೂಡ ಖುಷಿಯಾಗಿರ್ತಾರೆ. ದಯವಿಟ್ಟು ದುಡ್ಡಿನ ಮೋಹ ಬಿಟ್ಟು ಬಿಡಿ. ಯಾರೋ ಹೇಳಿದ್ದು ನೆನಪು, 

"ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ".


                                                                                             ಇಂತಿ ನಿಮ್ಮ,
                                                                                             ರವಿಕುಮಾರ

Wednesday, March 21, 2012

ನನ್ನ ಮೊದಲ ಬ್ಲಾಗ್...

ಇವತ್ತು ಬೆಳಿಗ್ಗೆ ಆಫೀಸಿಗೆ ಬಂದ ತಕ್ಷಣ ಇನಬಾಕ್ಸ್ ಓಪನ್ ಮಾಡಿದೆ. ಕಂಡಿದ್ದು ಮೂರು ಅಂಚೆಗಳು. ಅದ್ರಲ್ಲಿ ಲಾಸ್ಟ್ ಮೇಲ್ ಫ್ರಾಂ ಮೈ ಫ್ರೆಂಡ್. ಏನೇನೋ ದೊಡ್ಡ ಕಥೆ ಬರೆದು ಕಡೆಗೆ ಕಾಣಿಸಿದ್ದು "ಏನೋ ಗೊತ್ತಿಲ್ಲ" ಅಂತ. ಅದಕ್ಕೆ ನನಗು ಏನೋ ಗೊತ್ತಿಲ್ಲ ಏನಾದ್ರೂ ಬರೀಬೇಕು ಅನಿಸ್ತು. ಸರಿ ಅಂತ ಸುರು ಮಾಡಿದಿನಿ. ನನಗೆ ನಿಮ್ಮ ಎಲ್ಲರ ಅನಿಸಿಕೆಗಳು ಮತ್ತು ಅಭಿಪ್ರಾಯಗಳು ಬಹು ಮುಖ್ಯ. ದಯವಿಟ್ಟು ನಿಮಗೆ ಏನ್ ಅನಿಸುತ್ತೋ ಅದನ್ನ ಬರೆಯಿರಿ.  ಏನೋ ಗೊತ್ತಿಲ್ಲ ಅಂತ ಮಾತ್ರ ಬರಿಬೇಡಿ.

                                                                                                        ಇಂತಿ
                                                                                                      ರವಿಕುಮಾರ